ಕನ್ನಡ ಬ್ಲಾಗ್

 

ಕಾರ್ಯಕರ್ತನಾಗಿ ಗರ್ವ ಪಡುವ ನಿರ್ಣಯ ಪ್ರಕಟಿಸಿದ ರಾಜ್ಯ ಬಿಜೆಪಿ ಹಾಗೂ ಸಂಘಟನೆಗೆ ಧನ್ಯವಾದಗಳು…

ಹೌದು ಇಂದಿನಿಂದ ಶಾಂತರಾಮ ಸಿದ್ದಿ ಬಿಜೆಪಿಯ ಪರಿಷತ್ ಸದಸ್ಯ .!!!! ಸಣ್ಣ ಗೂಡಂಗಡಿ..ಪುಟ್ಟ ಮನೆ… ಹೊಟ್ಟೆ ತುಂಬಿಸಲು ೧೫ ಗುಂಟೆ ಗದ್ದೆ ಇದು ಬಿಟ್ಟರೆ ಆತನ ಬಳಿ ಎನು ಇಲ್ಲ…ಕನಿಷ್ಟ ಪ್ರಭಲ ಜಾತಿಯು ಇಲ್ಲದ ವನವಾಸಿ..ಕಾಡು ಆತನ ಬದುಕು.. ಕಾಡಿನ ಜನರೆ ಆತನ ಸಂಗಾತಿಗಳು….ಇಂತಹ ವ್ಯಕ್ತಿಯು ಬಿಜೆಪಿಯಿಂದ ಪರಿಷತ್ ಸದಸ್ಯ ಆಗಿರುವುದನ್ನು ಒಂದು ಕ್ಷಣಕ್ಕೆ ನಂಬಲಾಗದೆ ಕುಳಿತಿದ್ದೆನೆ…ಒಬ್ಬ ಕಾರ್ಯಕರ್ತನಾಗಿ ನನಾಗಾಗುತ್ತಿರುವ ಸಂತೋಷವನ್ನು ವ್ಯಕ್ತಪಡಿಸಲಾಗದ ಸ್ಥಿತಿಯಲ್ಲಿದ್ದೇನೆ… ಹೃದಯದ ಸಂತೋಷಕ್ಕೆ ಆನಂದ ಭಾಷ್ಪ ಸಾಥಿಯಾಗಿದೆ… ವಿರೋದಿ ಪಕ್ಷದ ಯಾವನಾದರು ಬಿಜೆಪಿ ಎಂದರೇನು ಎಂದು ಕೇಳಿದರೆ ಶಾಂತರಾಮ ಸಿದ್ದಿಯನ್ನು ಪರಿಷತ್ ಸದಸ್ಯರನ್ನಾಗಿಸುವ ನಿರ್ಣಯದ ಪ್ರತಿಯನ್ನು ಹಿಡಿದು ಮುಖದ ಮೇಲೆ ಬಿಸಾಕಿ ಇದೆ ಕಣೋ ಬಿಜೆಪಿ ಎಂದರೆ ಎಂದು ಹೇಳುವಷ್ಟು ಗರ್ವದ ಆವೇಶ ನನ್ನೊಳಗೆ ಭಲಗಟ್ಟಿದೆ…

ಶಾಂತರಾಮ ಸಿದ್ದಿ ಎಂದರೆ ಅದೊಂದು ಆದರ್ಶ ಬದುಕು…ಸಿದ್ದಿ ಜನಾಂಗದ ಮೊದಲ ಪದವೀದರ ..ಅತ್ಯಂತ ಕಡು ಬಡವ..ತನ್ನ ಜೀವನವನ್ನು ವನವಾಸಿಗಳ ಬದುಕನ್ನು ಹಸನು ಮಾಡಲು ತೇಯ್ದ ಗಂಧದ ಕೊರಡು…ಜೀವನದುದ್ದಕ್ಕೂ ವನವಾಸಿಗಳ ಕಲ್ಯಾಣಕ್ಕೆ ತಪಸ್ಸು ಮಾಡಿದ ಪರಿಣಾಮ ತಪಸ್ವಿಗೆ ಇಂದು ಬಿಜೆಪಿ ಅವರನ್ನು ಗುರುತಿಸಿ ಮೇಲ್ಮನೆಗೆ ಕಳುಹಿಸಿರುವುದು ಭಾರತೀಯ ರಾಜಕೀಯದಲ್ಲಿ ಒಂದು ಐತಿಹಾಸಿಕ ನ